ವುಲ್ಫ್, ರುಡಾಲ್ಫ್ 
	1816-93. ಸ್ವಿಸ್ ಖಗೋಳವಿಜ್ಞಾನಿ. ಜû್ಯೂರಿಕ್ ಸಮೀಪದ ¥sóÁಲ್ಯಾಂಡೆನ್‍ನಲ್ಲಿ 1816 ಜುಲೈ 7 ರಂದು ಜನಿಸಿದ. ಜû್ಯೂರಿಕ್, ವಿಯನ್ನ ಮತ್ತು ಬರ್ಲಿನ್‍ನಲ್ಲಿ ಖಗೋಳ ವಿಜ್ಞಾನಾಧ್ಯಯನ. ಸ್ನಾತಕ ಪದವಿ ಗಳಿಕೆ. ಅನಂತರ ಬರ್ನ್‍ನಲ್ಲಿ ಗಣಿತ ಮತ್ತು ಭೌತವಿಜ್ಞಾನ ಅಧ್ಯಾಪನ ವೃತ್ತಿ. ಬರ್ನ್‍ನ ಖಗೋಳ ವೀಕ್ಷಣಾಲಯದ ನಿರ್ದೇಶಕ (1847). ಜû್ಯೂರಿಕ್‍ನ ವಿಶ್ವವಿದ್ಯಾಲಯ ಮತ್ತು ಪಾಲಿಟೆಕ್ನಿಕ್ ಶಾಲೆಯಲ್ಲಿ ಖಗೋಳ ವಿಜ್ಞಾನ ಪ್ರಾಧ್ಯಾಪಕ (1855). ಅಲ್ಲಿ ಸ್ಥಾಪಿಸಲಾದ ಖಗೋಳ ವೀಕ್ಷಣಾಲಯದ (1864) ಮೊದಲನೆಯ ನಿರ್ದೇಶಕ. 1893 ಡಿಸೆಂಬರ್ 6 ರಂದು ನಿಧನನಾದ.
	ಡಿಸೆಂಬರ್ 1847ರಂದು ವೀಕ್ಷಿಸಿದ ಸೌರಕಲೆಗಳಿಂದ ಮತ್ತು ಜರ್ಮನ್ ಖಗೋಳ ವಿಜ್ಞಾನಿ ಹೈನ್ರಿಚ್ ಸ್ಯಾಮ್ಯುಯೆಲ್ ಶ್ವಾಬೆ (1789-1875) ಮಾಡಿದ ಸೌರಕಲೆ ಚಕ್ರದ ಆವಿಷ್ಕಾರದಿಂದ (1843)  ಪ್ರೇರಿತನಾಗಿ ಮುಂದಿನ 46 ವರ್ಷ ಕಾಲ ಆ ಬಗ್ಗೆ ಆಳವಾದ ಅಧ್ಯಯನ. ಈಗ ಸಾಪೇಕ್ಷ ಸೌರಕಲೆ ಸಂಖ್ಯೆ ಅಥವಾ ವುಲ್ಫ್ ಸೌರಕಲೆ ಸಂಖ್ಯೆ ಎಂದು ಖ್ಯಾತವಾಗಿರುವ ಸಂಖ್ಯೆ 11ರ ನಿರೂಪಣೆ ಈ ಸುದೀರ್ಘ ಅಧ್ಯಯನದ ಫಲ. 1700-1848ರ ಅವಧಿಯ ಸೌರಕಲೆಗಳ ಲಭ್ಯ ಮತ್ತು ಸ್ವವೀಕ್ಷಿತ ಮಾಹಿತಿಯನ್ನು ಆಧರಿಸಿ ಸೌರಕಲೆಗಳ ಸಂಖ್ಯೆಯಲ್ಲಿ 11 ವರ್ಷದ ನಿಯತಕಾಲಿಕ ಏರಿಳಿತ ಇರುವುದನ್ನು ಪತ್ತೆಹಚ್ಚಿದ.

	ಈತನ ಪ್ರಕಟಿತ ಕೃತಿಗಳು: ಮ್ಯಾತ್‍ಮ್ಯಾಟಿಕ್ಸ್, ಫಿಸಿಕ್ಸ್, ಜಿಯೊಡೆಸಿ ಮತ್ತು ಅಸ್ಟ್ರಾನೊಮಿ (1852-93, 6 ಮುದ್ರಣಗಳು);  ಹಿಸ್ಟೊರಿ ಆಫ್ ಅಸ್ಟ್ರಾನೊಮಿ (1877); ಹ್ಯಾಂಡ್‍ಬುಕ್ ಡೆರ್ ಅಸ್ಟ್ರಾನೊಮಿ (1893); ಬಯಾಗ್ರಫೀಸ್ ಆಫ್ ಸ್ವಿಸ್ ಮೆನ್ ಆಫ್ ಸೈನ್ಸ್‍ನ 4 ಸಂಪುಟಗಳು; ಹ್ಯಾಂಡ್‍ಬುಕ್ ಡೆರೆ ಮ್ಯಾತ್‍ಮ್ಯಾಟಿಕ್‍ನ 2 ಸಂಪುಟಗಳು.   
(ಎಸ್.ಎಚ್.ಬಿ.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ